ದಾದರ್ ನಲ್ಲಿರುವ 'ಹಿಂದೂ ಕಾಲೋನಿ', ಮುಂಬಯಿನ ಅತಿ ಹಳೆಯ ವಸಾಹತುಗಳಲ್ಲೊಂದು. ಪೂರ್ವದಲ್ಲಿ ಸೆಂಟ್ರೆಲ್ ರೈಲ್ವೆನಿಲ್ದಾಣದ ದಾದರ್, ಮತ್ತು ಮಾಟುಂಗಾ ರೈಲ್ವೆ ಸ್ಟೇಷನ್ ಗಳಿವೆ. ಪೂರ್ವದಲ್ಲಿ ಇಲ್ಲಿ ಮಹಾರಾಷ್ತ್ರದ ಬ್ರಾಹ್ಮಣರು ಹೆಚ್ಚಾಗಿ ವಾಸಿಸುತ್ತಿದ್ದರು. ೧೯೩೪ ರಲ್ಲಿ ನಿರ್ಮಿಸಿದ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ರ ಮನೆ, 'ರಾಜಗೃಹ' ಇದೇ ಕಾಲೋನಿಯಲ್ಲಿದೆ. 'ಮುಂಬಯಿಯ ಎಟಿಸ್ ಸ್ಕಾಡ್ ನ ಮುಖ್ಯಸ್ಥ', 'ಹೇಮಂತ್ ಕರ್ಕರೆ', ಈ ಕಾಲೋನಿಯಲ್ಲಿ ವಾಸ್ತ್ಯವ್ಯಹೂಡಿದ್ದರು. ೨೦೦೮ ರ ಆತಂಕಿಗಳ ಮುಂಬಯಿ ದಾಳಿಯಲ್ಲಿ ಅವರು ಕೊಲ್ಲಲ್ಪಟ್ಟರು. ಕರ್ಕರೆಯವರ ಪತ್ನಿ ಹಿಂದೂ ಕಾಲೋನಿಯಲ್ಲೇ ವಾಸವಾಗಿರುತ್ತಾರೆ. === ಬಾಲಚಂದ್ರರೋಡ್ ಉದ್ದಕ್ಕೂ === ಹಿಂದೂ ಕಾಲೋನಿ, ಮಾಟುಂಗದ 'ಆಸ್ತಿಕ ಸಮಾಜ' ದೇವಸ್ಥಾನದಿಂದ, ದಾದರ್ ನ 'ನಾಯರ್ ಸಮಾಜ' ಕಟ್ಟಡದ ವರೆಗೆ ವಿಸ್ತರಿಸಿದೆ. ದಾದರ್ (ಪೂ) ರೈಲ್ವೆ ನಿಲ್ದಾಣದಿಂದ ಮಾಟುಂಗಾ ರೈಲ್ವೆ ನಿಲ್ದಾಣದ ವರೆಗೆ ಹೋಗುವ ರಸ್ತೆ, ಹಿಂದೂ ಕಾಲೋನಿಯ ಪ್ರಮುಖ ರಸ್ತೆಗಳಲ್ಲೊಂದು. === ಪ್ರಮುಖ ಕಟ್ಟಡಗಳು, ಸಂಸ್ಥೆಗಳು === ರಾಜಾ ಶಿವಾಜಿ ವಿದ್ಯಾಲಯ, ರಾಜಗೃಹ, ರುಯಾಕಾಲೇಜ್, ಪೊದ್ದಾರ್ ಕಾಲೇಜ್, ನಾಯರ್ ಸಮಾಜ್, ಸ್ವಾಮಿನಾರಾಯಣ್ ದೇವಸ್ಥಾನ, ದಾದರ್ ಜಮಖಾನ, ಮಾಟುಂಗಾ ಜಮಖಾನ, ನಪ್ಪೂ ಹಾಲ್, ಸ್ವಾಮಿ ದಯಾನಂದ ವಿದ್ಯಾಲಯ, ಆಂಧ್ರ ಸಮಾಜ್, ನಪ್ಪೂ ಉದ್ಯಾನ್, ಮುಂತಾದವುಗಳು ಪಾರ್ಸಿ ಡೈರಿ, ಪೋಲಿಸ್ ಕಾಲೋನಿ, == ಉಲ್ಲೇಖಗಳು ==